Web: www.jogfalls.in               e-Mail: jogfalls.jma@gmail.com               Phone: 08183 - 226600, 226601
ಸಾಹಿತ್ಯ, ಕಲೆ, ಸಂಸ್ಕೃತಿ
    ಸಾಗರ ತಾಲೂಕಿನ ಜನ ಉಚ್ಛ ಕಲಾರಸಿಕರು ಮತ್ತು ಸಾಹಿತ್ಯಾರಾಧಕರು. ಬಹಳ ಜನ ಕಲಾವಿದರನ್ನ, ಸಾಹಿತಿಗಳನ್ನ ರಾಜ್ಯಕ್ಕೆ ಸಾಗರ ತಾಲೂಕು ನೀಡಿದೆ. ಸಾಗರದ 7 ಕಿ.ಮೀ ದೂರದಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣ ಕಟ್ಟಿ ಬೆಳೆಸಿದ ನೀನಾಸಂ (ನೀಲಕಂಠೇಶ್ವರ ನಾಟ್ಯ ಸಂಘ) ತನ್ನ ತಿರುಗಾಟಗಳಿಂದಾಗಿ ಬಹು ಪ್ರಸಿದ್ಧ.
    ಯಕ್ಷಗಾನ ಸಾಗರ ತಾಲೂಕಿನಲ್ಲಿ ಬಹಳ ಪ್ರಸಿದ್ಧವಾದ ಕಲಾಪ್ರಕಾರ. ಬೇಸಿಗೆಯ ಕಾಲದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಯಕ್ಷಗಾನ ಮೇಳದ ಪ್ರದರ್ಶನ ಏರ್ಪಾಡಾಗಿರುವುದನ್ನು ಕಾಣಬಹುದು.
ದಿವರ ಮದುವೆ ಹಾಡುಗಳು, ಹಬ್ಬದ ಹಾಡುಗಳು ಹಾಗು ಹಸೆ ಚಿತ್ರ ಕಲೆ ಇಲ್ಲಿ ಬಹಳ ಪ್ರಾಮುಖ್ಯತೆ ಪಡೆದಿವೆ.

ಜನ, ಮನ, ಭಾಷೆ
    ಸಾಗರದ ಜನ ಸಾಮಾನ್ಯವಾಗಿ ಶಾಂತಿಪ್ರಿಯರು ಮತ್ತು ಸ್ನೇಹಪ್ರಿಯರು. ಹೆಚ್ಚಿನ ಜನರು ಜೀವನಕ್ಕೆ ವ್ಯವಸಾಯವನ್ನ ಅವಲಂಬಿಸಿದ್ದಾರೆ. ಅಡಿಕೆ ಸಾಗರದ ಪ್ರಮುಖ ಬೆಳೆ ಭತ್ತ. ಕಬ್ಬು, ವೆನಿಲ್ಲಾ, ರಬ್ಬರ್ ಮತ್ತಿತರ ಬೆಳೆಗಳು ಕೂಡ ಪ್ರಚಲಿತದಲ್ಲಿವೆ. ಬಹಳ ಹವ್ಯಕರು ಸಾಗರದಲ್ಲಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ವಾಸಿಸುವುದರಿ೦ದ ಸಹಜವಾಗಿ ಸಾಗರದಲ್ಲಿ ಹವ್ಯಕ ಕನ್ನಡವೂ ಚಾಲ್ತಿಯಲ್ಲಿದೆ. ದೀವರು ಜನಾ೦ಗ ಇಲ್ಲಿ ಪ್ರಮುಖವಾದ ಪ೦ಗಡ.

ಪ್ರೇಕ್ಷಣೀಯ ಸ್ಥಳಗಳು
ಸಾಗರ
    ಸಾಗರ ಶಿವಮೊಗ್ಗ ಜಿಲ್ಲೆಯ ಒಂದು ನಗರ ಮತ್ತು ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ 360 ಕಿ.ಮೀ ದೂರದಲ್ಲಿರುವ ಸಾಗರ ನಗರವು ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ತವರಾಗಿದೆ. ಪ್ರಕೃತಿಪ್ರಿಯರಿಗೆ ಮತ್ತು ಚಾರಣಪ್ರಿಯರಿಗೆ ಸಾಗರ ಸ್ವರ್ಗ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ.
Back
Copyright 2012 Jog Management Authority. All rights reserved.
Sri Mahaganapathi Temple, Sagara
Sri Marikambe Temple, Sagara
Ikkeri Aghoreshwara Temple
Keladi Rameshwara Temple
Sri Choudeshwari Temple, Siganduru
Sri Sridhara Ashrama, Varadapura/Varadalli
Nadakalasi
Varadamula
JogFalls
Honnemaradu
Linganamakki Dam
NINASAM, Heggodu
Sri Choudeshwari Temple, Vadanbail, Joga
Sagar Tourist Places Map