Copyright 2012 Jog Management Authority. All rights reserved.
Back
Web: www.jogfalls.in               e-Mail: jogfalls.jma@gmail.com               Phone: 08183 - 226600, 226601
ಜೋಗ ನಿರ್ವಹಣಾ ಪ್ರಾಧಿಕಾರದ ಕಿರು ಪರಿಚಯ:
    ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದ್ದು, ಸಾಗರದಿಂದ 35 ಕಿ.ಮೀ. ದೂರದಲ್ಲಿರುತ್ತದೆ.  ಕಾರವಾರ ಜಿಲ್ಲೆಯ ಹೊನ್ನಾವರದಿಂದ 65 ಕಿ.ಮೀ. ದೂರದಲ್ಲಿರುತ್ತದೆ. 
    ಕರ್ನಾಟಕದ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ದಿ:20.05.2000ರಂದು ನಡೆದ ಜೋಗ್ ಜಲಪಾತದ ಸಭೆಯಲ್ಲಿ  ಜೋಗ್ ಸುತ್ತಮುತ್ತ ಸರ್ವಾಂಗೀಣ  ಅಭಿವೃದ್ಧಿಗಾಗಿ ಹೊಸ ನಿಗಮ ಸ್ಥಾಪಿಸುವವರೆಗೆ ಹಾಲಿ ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯಲ್ಲಿ ಇರುವ ಸಮಿತಿಯನ್ನು ಲಭ್ಯವಿರುವ ಅನುದಾನದಿಂದ ಯೋಜನೆಗಳ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿ ಮುಂದುವರೆಸಿಕೊಂಡು ಹೋಗಲು ತೀರ್ಮಾನಿಸಿದಂತೆ, ಪ್ರವಾಸೋದ್ಯಮ ಮಂಡಳಿ, ಶಿವಮೊಗ್ಗ ಜಿಲ್ಲಾ ಪಂಚಾಯತ್ ಹಾಗೂ ಉತ್ತರ ಕನ್ನಡ ಮತ್ತು ಶಿವಮೊಗ್ಗ ಸಂಸತ್ ಸದಸ್ಯರ ನಿಧಿಯಿಂದ  ಒಟ್ಟು Rs.400.00 ಲಕ್ಷಗಳನ್ನು ಪಡೆಯಲು ಮಂಜೂರಾತಿ ನೀಡಿರುತ್ತದೆ.
    ಈ ಸಮಿತಿಯ ತೀರ್ಮಾನದ ಹಿನ್ನೆಲೆಯಲ್ಲಿ ಸರ್ಕಾರಿ ಆದೇಶ ಸಂ.ITY 323 TTT 99 ದಿ:02.01.2002ರಲ್ಲಿ ಮಾನ್ಯ ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯಲ್ಲಿ 24 ಸದಸ್ಯರುಗಳುಳ್ಳ ಜೋಗ್ ನಿರ್ವಹಣಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು ಶಿವಮೊಗ್ಗ ಜಿಲ್ಲಾಧಿಕಾರಿಗಳವರು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನಾಗಿ ನೇಮಿಸಲಾಗಿರುತ್ತದೆ.  ಅಲ್ಲಿಂದ ಈವರೆಗೆ ಮಾನ್ಯ ಶಿವಮೊಗ್ಗ ಜಿಲ್ಲಾಧಿಕಾರಿಯವರ ನೆತ್ರತ್ವದಲ್ಲಿ ಸಮರ್ಥವಾಗಿ ನಡೆದುಕೊಂಡು ಬಂದಿರುತ್ತದೆ. ಹಾಲಿ ಕೆಲಸ ಕಾರ್ಯಗಳ  ಒತ್ತಡ ಹಾಗೂ ಸುಲಲಿತವಾದ ಆಡಳಿತದ ಹಿತದೃಷ್ಠಿಯಿಂದ ಸಾಗರ ಉಪವಿಭಾಗಾಧಿಕಾರಿಗಳನ್ನು ಪ್ರಾಧಿಕಾರದ ಸಹಕಾರ್ಯದರ್ಶಿಯಾಗಿ ನೇಮಕ ಮಾಡಿ ಅಭಿವೃದ್ಧಿ ಕಾರ್ಯ ಸುಗಮವಾಗಿ ನಿರ್ವಹಿಸಿಕೊಂಡು ಹೋಗಲು ಅನುವು ಮಾಡಿಕೊಡಲಾಗಿದೆ.
    ಪ್ರಾಧಿಕಾರದಲ್ಲಿ ಲಭ್ಯವಿರುವ  ಅನುದಾನಗಳನ್ನು ಬಳಸಿಕೊಂಡು, ಜೋಗ್ ಜಲಪಾತಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕಾಮಗಾರಿಗಳನ್ನು  ಲೋಕೋಪಯೋಗಿ ಇಲಾಖೆ, ಕರ್ನಾಟಕ ಭೂ ಸೇನಾ ನಿಗಮ, ನಿರ್ಮಿತಿ ಕೇಂದ್ರ, ಅರಣ್ಯ ಇಲಾಖೆ  ಹಾಗೂ ಇತರೆ ಸಂಸ್ಥೆಗಳ ಮೂಲಕ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ.
    ಜೋಗ್ ಹತ್ತಿರ ಇರುವ ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿ ಇರುವ ಸುಮಾರು 60.00 ಎ. ಖಾಲಿ ಜಮೀನನ್ನು ಕರ್ನಾಟಕ ವಿದ್ಯುತ್ ನಿಗಮ ನಿ., ರವರಿಂದ  ಜೋಗ್ ನಿರ್ವಹಣಾ ಪ್ರಾಧಿಕಾರಕ್ಕೆ  ವರ್ಗಾಯಿಸಿಕೊಂಡು,  ಸದರೀ ಪ್ರದೇಶದಲ್ಲಿ ಅಂತರಾಷ್ಟ್ರೀಯ ಮಟ್ಟದ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಯೋಜನೆಯನ್ನು ರೂಪಿಸಿ,  ಶ್ರೀಮತಿ ಶೋಭಾ ಬೋಪಟ್ಕರ್ & ಅಸೋಸಿಯೇಟ್ಸ್, ಪೂನಾ ರವರನ್ನು ವಿನ್ಯಾಸಕಾರರು ಹಾಗೂ ವಾಸ್ತು ಶಿಲ್ಪ ತಜ್ಞರನ್ನಾಗಿ ನೇಮಿಸಲಾಗಿದ್ದು, ಇವರು ತಯಾರಿಸಿರುವ ವಿನ್ಯಾಸದ ಮೇರೆಗೆ  ನಕ್ಷೆ ಮತ್ತು ಅಂದಾಜು ಪಟ್ಟಿಯನ್ನು ತಯಾರಿಸಿ ಕೇಂದ್ರಸರ್ಕಾರದಿಂದ  Rs.494.98 ಲಕ್ಷಗಳಿಗೆ ಮಂಜೂರಾತಿ ಪಡೆದಿದೆ.  
    ದಿನಾಂಕ:24.12.2007ರಂದು ಮಾನ್ಯ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗದಲ್ಲಿ ನಡೆದ ಜೋಗ್ ನಿರ್ವಹಣಾ ಪ್ರಾಧಿಕಾರದ ಸರ್ವಸದಸ್ಯರ ಸಭೆಯಲ್ಲಿ ಈ ಯೋಜನೆಯನ್ನು IDECK ಸಂಸ್ಥೆಗೆ ವಹಿಸಿ PPP ಮಾಡೆಲ್ ತಯಾರಿಸಲು ಕೋರಲಾಗಿ, ಟೆಂಡರ್ ಮೂಲಕವಾಗಿ BOOT ಆಧಾರದ ಮೇರೆಗೆ M/s. SOMA BELMAN CONSORTIUM, HYDERABAD (M/s.SOMA  Enterprises Unit)  ರವರಿಗೆ ಫೆಬ್ರವರಿ, 2009ರಿಂದ 30 ವರ್ಷದ ಅವಧಿಗೆ ಟೆಂಡರ್ ಅನುಮೋದಿಸಿ ಜೋಗ್ ಜಲಪಾತದಲ್ಲಿ ಅಂದಾಜು 2.00 ಎಕರೆ ಜಮೀನಿನಲ್ಲಿ ಹೆರಿಟೇಜ್ ಹೋಟೆಲ್ ನಿರ್ಮಿಸಲು ಅನುಮತಿ ನೀಡಲಾಗಿದೆ. 
    ಜೋಗ್ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮವಾದ ಸೌಲಭ್ಯಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಜೋಗ್ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ವಾಹನ ನಿಲುಗಡೆ ಶುಲ್ಕವನ್ನು ದಿ: 01.06.2004ರಿಂದ ವಿಧಿಸಲಾಗುತ್ತಿದ್ದು, ಇದರ ಜವಾಬ್ದಾರಿಯನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ರವರಿಗೆ ವಹಿಸಲಾಗಿರುತ್ತದೆ.  ಈ ಪ್ರವೇಶ ಶುಲ್ಕದಿಂದ ಬರುವ ಆದಾಯದ  25% ಭಾಗವನ್ನು ಕೆ.ಎಸ್.ಟಿ.ಡಿ.ಸಿ. ಸಂಸ್ಥೆಗೆ ಹಾಗೂ ಉಳಿದ 75% ಭಾಗವನ್ನು ಪ್ರಾಧಿಕಾರಕ್ಕೆ ನೀಡುವ ಷರತ್ತು ವಿಧಿಸಿದೆ.   ಪ್ರಾಧಿಕಾರಕ್ಕೆ ಬರುವ 75% ಭಾಗದ ಮೊಬಲಗಿನಲ್ಲಿ ಜೋಗ್ ಜಲಪಾತದ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲು ಉಪಯೋಗಿಸಲಾಗುತ್ತಿದೆ. 
    ಜೋಗ್ ನಿರ್ವಹಣಾ ಪ್ರಾಧಿಕಾರಕ್ಕೆ 2004-05ನೇ ಸಾಲಿನಲ್ಲಿ ಜೋಗ್ ಜಲಪಾತ ಪ್ರದೇಶದ ಮೂಲಭೂತ ಅಭಿವೃದ್ಧಿ ಕುರಿತು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಡೆಸ್ಟಿನೇಷನ್ ಡೆವೆಲಪಮೆಂಟ್ ಯೋಜನೆಯಡಿ, ಕೇಂದ್ರ ಸರ್ಕಾರದ ಆದೇಶ ಸಂ.5-PSW/5/2005 ದಿ:07.01.2005ರಲ್ಲಿ Rs.462.52 ಲಕ್ಷಗಳನ್ನು ಮಂಜೂರು ಮಾಡಿದೆ. 
Jog Management Authority
Jog Falls
Sagar Taluk 
Shivamogga, Karnataka
08183-226600, 08183-226601
jogfalls.jma@gmail.com
A.C. Office, Sagara